ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಯನ್‌ ಲಾರಾ ಚೇತರಿಕೆ

Last Updated 26 ಜೂನ್ 2019, 19:45 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಎದೆನೋವಿನ ಕಾರಣ ಇಲ್ಲಿಯ ಆಸ್ಪತ್ರೆಗೆ ದಾಖಲಾಗಿದ್ದಕ್ರಿಕೆಟ್‌ ದಿಗ್ಗಜ ವೆಸ್ಟ್‌ ಇಂಡೀಸ್‌ನ ಬ್ರಯನ್‌ ಲಾರಾ ಬುಧವಾರ ಚೇತರಿಸಿಕೊಂಡರು. ಅವರು ಸಂಪೂರ್ಣ ಗುಣಮುಖರಾಗಿರುವುದಾಗಿ ಆಸ್ಪತ್ರೆ ಮೂಲಗಳು ಹೇಳಿವೆ.

‘ಮಧ್ಯಾಹ್ನ 12:20ರ ಸಮಯದಲ್ಲಿ ಅವರು (ಲಾರಾ) ಆಸ್ಪತ್ರೆಯಿಂದ ತೆರಳಿದರು. ಈಗ ಅವರು ಗುಣಮುಖವಾಗಿದ್ದಾರೆ’ ಎಂದು ಮಾತ್ರ ತಿಳಿಸಿದ ಆಸ್ಪತ್ರೆಯ ಅಧಿಕಾರಿಯೊಬ್ಬರು ಇತರ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಲಿಲ್ಲ.

ಮಂಗಳವಾರ ದೊರೆತ ಮಾಹಿತಿಯಂತೆ ಲಾರಾ ಅವರ ಆರೋಗ್ಯದ ಕುರಿತ ಅನುಮಾನ ಕಳವಳಕ್ಕೆ ಕಾರಣವಾಗಿತ್ತು.

‘ಜಿಮ್‌ನಲ್ಲಿ ನಾನು ಹೆಚ್ಚು ಸಮಯ ಕಳೆದಿರಬಹುದು. ಈ ವೇಳೆಯಲ್ಲಿ ಎದೆಯಲ್ಲಿ ನೋವು ಕಾಣಿಸಿಕೊಂಡಿತ್ತು. ಹಾಗಾಗಿ ವೈದ್ಯರನ್ನು ಕಾಣುವುದು ಸೂಕ್ತ ಎಂದು ಅನಿಸಿತು’ ಎಂದು ಲಾರಾ ಮಂಗಳವಾರ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT